Index   ವಚನ - 73    Search  
 
ನರರನುಪಧಾವಿಸಿ ಅವರಿಚ್ಛೆಗೆ ನುಡಿದು, ಬಂದ ಒಡಲ ಹೊರೆದು, ಹಿರಿಯರೆನಿಸಿಕೊಂಬ ಡಂಬಕತನಕಾನಂಜುವೆನಯ್ಯಾ. ಹಿರಿದಡವಿಯ ಗಿರಿಗಹ್ವರದೊಳಗೆ ಪರಿಪರಿಯ ಹೂಪತ್ರೆಯ ತಂದು, ಬಿಡದೆ ಲಿಂಗದೇವನ ಪೂಜಿಸುತ, ನೋಡುವ ಸುಖವೆಂದಪ್ಪುದೊ ಎನಗೆ? ಸಕಳೇಶ್ವರದೇವಾ, ಶರಣೆಂದು ವೀಣಾವಾದ್ಯವ ಬಾರಿಸುತ, ಆಡಿ ಹಾಡುವ ಸುಖವೆನಗೆಂದಪ್ಪುದೊ ಶ್ರೀಶೈಲದಲ್ಲಿ?