ಪರೀಕ್ಷೆಯನಾರು ಬಲ್ಲರು? ಪರೀಕ್ಷೆಯನಾರು ಬಲ್ಲರು?
ನಾದಬಿಂದುವಿನ ವಿಕೃತಿಯೊಳಗಣ ಹಂಸನ ಸ್ಥಳವಿಟ್ಟಾತ,
ಶಶಿಧರನಲ್ಲದೆ ಮತ್ತೊಬ್ಬನಿಲ್ಲ.
ಲೋಲುಪ್ತರಾದವರೆಲ್ಲ, ಹಂಸನ ವಂಶಿಕರಲ್ಲದೆ,
ಸುಪ್ಪಾಣಿಯಂತೆ ಸುಪಥವಾದ
ಶರಣಂಗೆ ಹತ್ತೂದೆ ಲೌಕಿಕಾರ್ಥ?
ಮುತ್ತ ಹುಳಿತಡೆ, ನಾತ ಹುಟ್ಟುವದೆ ಲೋಕದಲ್ಲಿ?
ಬಯಕೆವಂತರೆಲ್ಲ ಐಕ್ಯವಂತರಹರೆ?
ಹೊನ್ನು ಧರೆಯ ಮೇಲೆ ಬಿದ್ದರೆ, ನಿಟ್ಟೈಸುವದೆ?
ಗಂಭೀರದ ತೆರನನರಿಯದವನ ನಿಧಿ,
ಪರಮಪರೀಕ್ಷೆಯನರಿಯದೆ,
ಪರುಷದಂತಿಪ್ಪ ಮಹಂತ ಧರೆಯ ಮೇಲೆ,
ಕಾರಮೇಘ ಸುರಿದು, ನದಿಯ ಬೆರಸುವಂತೆ,
ಧರೆಯೊಳಗೆ ಹುಟ್ಟಿದ ಪುಣ್ಯಾಲಯಂಗಳ ಮಾಡಿ.
ನಿಮ್ಮ ಬೆರಸುವನೆ, ಸಕಳೇಶ್ವರದೇವಾ ನಿಮ್ಮ ಶರಣ.
Art
Manuscript
Music
Courtesy:
Transliteration
Parīkṣeyanāru ballaru? Parīkṣeyanāru ballaru?
Nādabinduvina vikr̥tiyoḷagaṇa hansana sthaḷaviṭṭāta,
śaśidharanallade mattobbanilla.
Lōluptarādavarella, hansana vanśikarallade,
suppāṇiyante supathavāda
śaraṇaṅge hattūde laukikārtha?
Mutta huḷitaḍe, nāta huṭṭuvade lōkadalli?
Bayakevantarella aikyavantarahare?Honnu dhareya mēle biddare, niṭṭaisuvade?
Gambhīrada terananariyadavana nidhi,
paramaparīkṣeyanariyade,
paruṣadantippa mahanta dhareya mēle,
kāramēgha suridu, nadiya berasuvante,
dhareyoḷage huṭṭida puṇyālayaṅgaḷa māḍi.
Nim'ma berasuvane, sakaḷēśvaradēvā nim'ma śaraṇa.