Index   ವಚನ - 81    Search  
 
ಪರಸತಿಯೆನಗೆ ತಾಯ ಸಮಾನವಯ್ಯಾ. ಕನ್ಯಾಸ್ತ್ರೀ ಎನಗೆ ಸೋದರ ಸಮಾನವಯ್ಯಾ. ವಿಧವೆಯೆನಗೆ ಅಮೇಧ್ಯದ ಸಮಾನವಯ್ಯಾ. ಪಣ್ಣಾಂಗನೆಯ ಸಂಗವೆನಗೆ ಕುನ್ನಿಯ ಸಮಾನವಯ್ಯಾ. ದಾಸಿಯ ಸಂಗವೆನಗೆ ಸೂಕರನ ಮಾಂಸದ ಸಮಾನವಯ್ಯಾ. ಇಂತಿದಕ್ಕೆ ಹೇಸದೆ ಆಶೆಯ ಮಾಡಿ, ತನುಲೋಭದಿಂದ ಕೂಡಿದಡೆ, ತನುವ ದಿಗ್ಬಲಿಗೊಡುವೆ. ಮನಲೋಭದಿಂದ ನೆನೆದಡೆ. [ರವಿ]ಶಶಿಗಳುನ್ನಕ್ಕರ ನರಕದಲ್ಲಿಕ್ಕದಿರ್ದೆಯಾದಡೆ ನಿನಗೆನ್ನಾಣೆಯಯ್ಯಾ ಸಕಳೇಶ್ವರಾ.