Index   ವಚನ - 94    Search  
 
ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ. ಮಾಡಿ ಭೋ, ಮಾಡಿ ಭೋ. ಎನಗೆ ಲೇಸಾಯಿತ್ತು, ಹೋಯಿತ್ತೆಂಬ ಚಿಂತೆ ಬೇಡ, ಇದ್ದಿತೆಂಬ ಸಂತೋಷ ಬೇಡ, ಸಕಳೇಶ್ವರದೇವನವರನರಿದು ಸಲಹುವನಾಗಿ.