ಮೇಘಧಾರೆಯಿಂದ ಸುರಿದ ಹನಿಯೆಲ್ಲ ಮುತ್ತಪ್ಪವೆ?
ಧರೆಯ ಮೇಲಿಪ್ಪರೆಲ್ಲ ಶರಣರಪ್ಪರೆ?
ಪರುಷವ ಮುಟ್ಟದೆ ಪಾಷಾಣವ
ಮುಟ್ಟಿದ ಕಬ್ಬುನ ಹೇಮವಹುದೆ?
ಅಷ್ಟವಿಧಾರ್ಚನೆ ಶೋಡಷೋಪಚಾರವ ಮಾಡಿ,
ಭಾವ ಮುಟ್ಟದಿರ್ದಡೆ ವಾಯ ಕಾಣಿ ಭೋ.
ರಜವ ತೂರಿ ಚಿನ್ನವನರಸುವಂತೆ,
ನಿಮ್ಮನರಿಯದೆ, ಅಂಜನವನೆಚ್ಚಿದ ಕಣ್ಣಿಗೆ ತೋರೂದೆ ಕಡವರ?
ಜಂಗಮವ ನಂಬಿದ ಮಹಂತಂಗೆ ತೋರದಿಪ್ಪನೆ ತನ್ನ?
ಎಲ್ಲಾ ದೈವವ ಪೂಜಿಸಿ, ಬರಿದಾದೆಲವದ ಫಲದಂತೆ,
ಸಕಳೇಶ್ವರನ ಸಕೀಲವನರಿಯದವರು ಇಲ್ಲಿಂದತ್ತಲೆ.
Art
Manuscript
Music
Courtesy:
Transliteration
Mēghadhāreyinda surida haniyella muttappave?
Dhareya mēlipparella śaraṇarappare?
Paruṣava muṭṭade pāṣāṇava
muṭṭida kabbuna hēmavahude?
Aṣṭavidhārcane śōḍaṣōpacārava māḍi,
bhāva muṭṭadirdaḍe vāya kāṇi bhō.
Rajava tūri cinnavanarasuvante,
nim'manariyade, an̄janavaneccida kaṇṇige tōrūde kaḍavara?
Jaṅgamava nambida mahantaṅge tōradippane tanna?
Ellā daivava pūjisi, baridādelavada phaladante,
sakaḷēśvarana sakīlavanariyadavaru illindattale.