Index   ವಚನ - 100    Search  
 
ಮೊಲೆ ಮುಡಿ ಮುದ್ದು ಮುಖದ ಅಸಿಯ ನಡುವಿನವಳ ಕಂಡಡೆ, ಬ್ರಹ್ಮಚಾರಿಯಾದಡೇನು, ಮನದಿ ಅಳುಪದಿಪ್ಪನೆ? ತನುವಿನ ಮೇಲೆ ಬ್ರಹ್ಮಚಾರಿತ್ರವಳವಟ್ಟಡೇನು? ಮನದ ಮೇಲೆ ಬ್ರಹ್ಮಚಾರಿತ್ರವಳವಡದನ್ನಕ್ಕ! ಸಕಲೇಶ್ವರದೇವ, ನೀ ಅರ್ಧನಾರಿಯಲ್ಲವೆ?