Index   ವಚನ - 101    Search  
 
ಯತಿಗೆ ಲಾಂಛನವೇಕೆ? ಶುಚಿಗೆ ಮೂದಲೆಯೇಕೆ? ಕಲಿಗೆ ಕಜ್ಜವೇಕೆ? ಒಲವಿಂಗೆ ರೂಹೇಕೆ? ದಿಟವುಳ್ಳ ಮನಕ್ಕೆ ಆಚಾರವೇಕೆ? ಸಜ್ಜನಸ್ತ್ರೀಗೆ ಬೇರೆ ನೋಂಪಿಯೇಕೆ? ಭೃತ್ಯಾಚಾರವಿಂಬುಗೊಂಡವರ ಮನವ, ಮಹಂತ ಸಕಳೇಶ್ವರದೇವನೆ ಬಲ್ಲ.