Index   ವಚನ - 107    Search  
 
ಶಂಭುವಿಕ್ಕಿದ ಆಜ್ಞೆಯ ಮೀರಿ, [ಅಂಬ]ರವಡ್ಡಬಿದ್ದಿತ್ತೆ? ಅಂಬುಧಿ ಮೇರೆವರಿಯಿತ್ತೆ? ಧಾರುಣಿಯೆಂಬುದೊಂದು ನೀರಲಿ ನೆರೆಯಿತ್ತೆ? ತಾನಿಪ್ಪನೆ ಆತನ ಒಳಗೆ? ಅಂಗದ ಮೇಲಣ ಲಿಂಗ ಹಿಂಗಿದ ಭಂಗವನರಿಯದೆ, ನುಡಿವುತ್ತಿಪ್ಪ ಭಂಗಿತರನೇನೆಂಬೆನಯ್ಯಾ! ಮಹೇಶ್ವರತ್ವವ ನುಡಿದಡೆ ಹೇಸುವನಯ್ಯಾ ಶಿವನು. ಸ್ವೀಕರಿಸುವೆನಾ ಕೆಲರ ಕೈಯಲಿ. ಸತ್ಯವುಳ್ಳಡೆ ಸಾಗರಹೊಕ್ಕ ಲಿಂಗ, ಅಗ್ರದಿಂದ ಬಾರದೆ ಸಕಳೇಶ್ವರದೇವಾ, ನಿಮ್ಮ ಶರಣರಿಗೆ?