Index   ವಚನ - 108    Search  
 
ಶತವೇದಿ, ಸಹಸ್ರವೇದಿಗಳು, ಕಬ್ಬುನವ ಹೊನ್ನ ಮಾಡುವ ಸಿದ್ಧರಸವಾದಡೇನು? ಅಂತಿರಲಿ, ಅಂತಿರಲಿ. ದೀಪವಾದಿಗಳು ಜಲವಾದಿಗಳು, ಹಿರಣ್ಯಂಗಳ ವೇಧಿಸುವ ವೇದಿಗಳಾದಡೇನು? ಅಂತಿರಲಿ, ಅಂತಿರಲಿ. ಘಟದಿಟ ಚಂದನ ಪರುಷ ಕಾಗೆಯ ಹೊಂಬಣ್ಣದ ಮಾಡುವ ಮೇರುವಾದಡೇನು? ಅಂತಿರಲಿ, ಅಂತಿರಲಿ. ಸಕಳೇಶ್ವರದೇವಾ, ನಿಮ್ಮ ಶರಣರು. ಸ್ವತಂತ್ರ[ರು], ಘನಮಹಿಮರು. ಶರವೇದಿ ಶಬುದವೇದಿ ಕ್ಷಣವೇದಿಯೆಂಬವರು, ಲಿಂಗವೇದಿಗೆಂತು ಸರಿಯೆಂಬೆ?