ಶತವೇದಿ, ಸಹಸ್ರವೇದಿಗಳು,
ಕಬ್ಬುನವ ಹೊನ್ನ ಮಾಡುವ ಸಿದ್ಧರಸವಾದಡೇನು?
ಅಂತಿರಲಿ, ಅಂತಿರಲಿ.
ದೀಪವಾದಿಗಳು ಜಲವಾದಿಗಳು,
ಹಿರಣ್ಯಂಗಳ ವೇಧಿಸುವ ವೇದಿಗಳಾದಡೇನು?
ಅಂತಿರಲಿ, ಅಂತಿರಲಿ.
ಘಟದಿಟ ಚಂದನ ಪರುಷ
ಕಾಗೆಯ ಹೊಂಬಣ್ಣದ ಮಾಡುವ ಮೇರುವಾದಡೇನು?
ಅಂತಿರಲಿ, ಅಂತಿರಲಿ.
ಸಕಳೇಶ್ವರದೇವಾ, ನಿಮ್ಮ ಶರಣರು.
ಸ್ವತಂತ್ರ[ರು], ಘನಮಹಿಮರು.
ಶರವೇದಿ ಶಬುದವೇದಿ ಕ್ಷಣವೇದಿಯೆಂಬವರು,
ಲಿಂಗವೇದಿಗೆಂತು ಸರಿಯೆಂಬೆ?
Art
Manuscript
Music
Courtesy:
Transliteration
Śatavēdi, sahasravēdigaḷu,
kabbunava honna māḍuva sid'dharasavādaḍēnu?
Antirali, antirali.
Dīpavādigaḷu jalavādigaḷu,
hiraṇyaṅgaḷa vēdhisuva vēdigaḷādaḍēnu?
Antirali, antirali.
Ghaṭadiṭa candana paruṣa
kāgeya hombaṇṇada māḍuva mēruvādaḍēnu?
Antirali, antirali.
Sakaḷēśvaradēvā, nim'ma śaraṇaru.
Svatantra[ru], ghanamahimaru.
Śaravēdi śabudavēdi kṣaṇavēdiyembavaru,
liṅgavēdigentu sariyembe?