Index   ವಚನ - 134    Search  
 
ಹೊಯಿದ ಹರೆಗೆ ಕುಣಿದಾಡುವರೆಲ್ಲಾ. ಹಾಡಿದ ಗೀತಕ್ಕೆ ತಲೆದೂಗುವರೆಲ್ಲಾ. ಪಂಜರದೊಳಗಣ ಅರಗಿಳಿಯಂತೆ, ಅದು ಆಡುವದು, ಹಾಡುವದು. ಸಕಳೇಶ್ವರದೇವರಲ್ಲಿ, ಅಭ್ಯಾಸಕ್ಕೆ, ಮಜ್ಜನಕ್ಕೆ ಎರೆವರೆಲ್ಲಾ ಭಕ್ತರೆ?