ಅಂಗದ ಕಳೆ ಲಿಂಗದಲ್ಲಿ ಲೀಯವಾಗದು.
ಲಿಂಗದ ಕಳೆ ಅಂಗದಲ್ಲಿ ಲೀಯವಾಗದು.
ಮಾತಿನಮಾಲೆಯ ಬೊಮ್ಮವೇತರದೊ?
ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು.
ಪ್ರಾಣ ಜಂಗಮವಾದಡೆ ಅರಿದಿರಬೇಕು.
ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ.
ಹಿರಿಯರು ಬಂದಡೆ ಇದಿರೆದ್ದು
ಬಾರದವರ ಮನೆಗೆ ಅಡಿಯ ಇಡೆವೆಂದು,
ಬಸವಪ್ರಿಯ ಕೂಡಲಚನ್ನಸಂಗನ
ಶರಣರು ಕಾಡಿಹರು ಕಾಣಾ,
ಸಂಗನಬಸವಣ್ಣಾ.
Art
Manuscript
Music
Courtesy:
Transliteration
Aṅgada kaḷe liṅgadalli līyavāgadu.
Liṅgada kaḷe aṅgadalli līyavāgadu.
Mātinamāleya bom'mavētarado?
Kāya bhaktanādare bhr̥tyācāravirabēku.
Prāṇa jaṅgamavādaḍe aridirabēku.
Intu bhaktijñānavuḷḷavarallade bhaktaralla, śaraṇaralla.
Hiriyaru bandaḍe idireddu
bāradavara manege aḍiya iḍevendu,
basavapriya kūḍalacannasaṅgana
śaraṇaru kāḍ'̔iharu kāṇā,
saṅganabasavaṇṇā.