ಅನಿಮಿಷನಾದ ನಿಬ್ಬೆರಗಿನ ಲಿಂಗೈಕ್ಯನು,
ಭಾವ ನಿರ್ಭಾವವನೆಯ್ದಿ,
ಜ್ಞಾನವೆ ಪರಮಾಶ್ರಯವಾಗಿಪ್ಪ ಲಿಂಗೈಕ್ಯನು,
ಮಹವನೊಳಕೊಂಡ ಮಹಿಮ ಲಿಂಗೈಕ್ಯನು,
ಬಸವಪ್ರಿಯ ಕೂಡಲ ಚನ್ನಸಂಗಯ್ಯಾ
ನಿಮ್ಮ ಶರಣ ಪ್ರಭುದೇವರು.
Art
Manuscript
Music
Courtesy:
Transliteration
Animiṣanāda nibberagina liṅgaikyanu,
bhāva nirbhāvavaneydi,
jñānave paramāśrayavāgippa liṅgaikyanu,
mahavanoḷakoṇḍa mahima liṅgaikyanu,
basavapriya kūḍala cannasaṅgayyā
nim'ma śaraṇa prabhudēvaru.