Index   ವಚನ - 10    Search  
 
ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು, ಮನೆಮನೆದಪ್ಪದೆ ತಿರುಗುವೆನು. ಅವರ ಇಚ್ಛಿಗೆ ಅನುಮಾನವಿಡಿದು ನುಡಿವೆನು. ಅವರ ಮನಧರ್ಮವನರಿಯದೆ ನುಡಿದೆನಾದಡೆ, ಅನೇಕ ಪರಿಯಲ್ಲಿ ಭಂಗಬಡುವೆನು. ದಿಟದ ಭಕುತನಂತೆ, ಪುರಾತರ ವಚನಂಗಳ ಉದರ ನಿಮಿತ್ತವಾಗಿ ಬಳಸುವೆನು. [ಕಡು] ಪಾಪಿಗಿನ್ನೇನು ಹದನಯ್ಯ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ?