Index   ವಚನ - 13    Search  
 
ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ. ಮರ ಬೆಂದು ನಿಂದುರಿಯಿತ್ತು, ಮಣ್ಣು ಜರಿದು ಬಿದ್ದಿತ್ತು. ಉರಿ ಹೊಗೆ ನಂದಿತ್ತು, ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು. ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು. ಇದ ಕಂಡು, ನಾ ಬೆರಗಾಗಿ ನೋಡುತ್ತಿದ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.