Index   ವಚನ - 26    Search  
 
ಎಲ್ಲರಿಗಿಂದಧಿಕವು ಪುರಾತನರೆಂದು ಶರಣು ಶರಣೆನುತಿದೆ ವೇದ, ಶರಣೆಂದು ಸಾರುತಿದೆ ವೇದ ನೋಡಾ. ಓಂ ಅಥೋ ಯೇ ಅಸ್ಯ ಸತ್ವಾನೋಹಂ ತೇಭ್ಯೋಕರನ್ನಮಃ | ಪ್ರಮುಂಚ ಧನ್ವನಸ್ತ್ವಮುಭಯೇರಾತ್ನಿ ಯೋರ್ಜಾಂ ಯಾಶ್ಚತೇ ಹಸ್ತ ಇಷವಃ ಪರಾತಾ || ಎಂಬ ಶ್ರುತಿ, ಬಸವಪ್ರಿಯ ಕೂಡಲಚನ್ನಸಂಗಾ, ಸದ್ಭಕ್ತರಿಗೆ ಶರಣೆನುತ್ತಿದೆ ವೇದ.