ಎಲ್ಲಾ ಪುರಾತರ ಚರಣಕೆ ಇಲ್ಲಿರ್ದೆ ಶರಣೆಂದಡೆ ಸಾಲದೆ?
ಬಸವಾ, ಬಸವಪ್ಪ, ಬಸವಯ್ಯ ಶರಣೆಂದಡೆ ಸಾಲದೆ?
ಎಲ್ಲರ ಹೃದಯದಲ್ಲಿ ಜ್ಯೋತಿಯಂತೆ ಬೆಳಗುತಿಪ್ಪ
ಮಹಾಮಹಿಮ ನೀನಾಗಿ, ಎನಗಿದೇ ದಿವ್ಯಮಂತ್ರ.
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ
ಬಸವಾ, ಬಸವಾ, ಬಸವಾ ಶರಣೆಂದ[ಡೆ]ಸಾಲದೆ?
Art
Manuscript
Music
Courtesy:
Transliteration
Ellā purātara caraṇake illirde śaraṇendaḍe sālade?
Basavā, basavappa, basavayya śaraṇendaḍe sālade?
Ellara hr̥dayadalli jyōtiyante beḷagutippa
mahāmahima nīnāgi, enagidē divyamantra.
Basavapriya kūḍalacennasaṅgayyanalli
basavā, basavā, basavā śaraṇenda[ḍe]sālade?