Index   ವಚನ - 27    Search  
 
ಎಲ್ಲಾ ಪುರಾತರ ಚರಣಕೆ ಇಲ್ಲಿರ್ದೆ ಶರಣೆಂದಡೆ ಸಾಲದೆ? ಬಸವಾ, ಬಸವಪ್ಪ, ಬಸವಯ್ಯ ಶರಣೆಂದಡೆ ಸಾಲದೆ? ಎಲ್ಲರ ಹೃದಯದಲ್ಲಿ ಜ್ಯೋತಿಯಂತೆ ಬೆಳಗುತಿಪ್ಪ ಮಹಾಮಹಿಮ ನೀನಾಗಿ, ಎನಗಿದೇ ದಿವ್ಯಮಂತ್ರ. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಬಸವಾ, ಬಸವಾ, ಬಸವಾ ಶರಣೆಂದ[ಡೆ]ಸಾಲದೆ?