ನಿಮ್ಮ ಕೃಪೆಯಿಂದ ಎಲ್ಲಾ ಗಣಂಗಳಿಗೆ ಬಿನ್ನಹ ಮಾಡಿಹೆನು,
ನೀವು ಮರ್ತ್ಯಕ್ಕೆ ಬರುವಂದಿಗೆ.
ರಾಕ್ಷಸ ಸಂವತ್ಸರ ಹತ್ತೋಂಭತ್ತು ಬಾರಿಗಲ್ಲದೆ ನೀವು ಬರಲಿಲ್ಲ
ಅಂದಿಗೆ ಏಳ್ನೂರ ಎಪ್ಪತ್ತು ವರುಷ ಸಂದಿತ್ತು
ಆ ಸಂವತ್ಸರದೊಳಗೆ ಮೂರು ವರುಷ ಮಿಕ್ಕಿತ್ತು
ರಾಕ್ಷಸ ಸಂವತ್ಸರ ಆನಂದ ಸಂವತ್ಸರಕ್ಕೆ ಹೋದೀತು
ಅಂದಿಗೆ ನೀವು ಬಿಜಯಂ ಮಾಡಿರಿ
ನೀವು ಬಂದ ಮೂರುವರೆ ತಿಂಗಳಿಗೆ
ನಾವು ನಮ್ಮ ಚನ್ನಬಸವೇಶ್ವರ ದೇವರು ಸಹಿತಲ್ಲದೆ ಬಾರೆವು
ಈ ವಚನ ಬಸವ ಪ್ರಿಯ
ಕೂಡಲಚನ್ನಸಂಗನ ಶರಣರು ಸಾಕ್ಷಿಯಾಗಿ
ಬಸವೇಶ್ವರ ದೇವರ ಮನೆಯ ಪ್ರಸಾದಕೊಂಡದ
ಬಾಗಿಲಲ್ಲಿ ನಿಕ್ಷೇಪಿಸಿದರು
ಪ್ಲವಂಗ ಸಂವತ್ಸರದಲ್ಲಿ ಒಬ್ಬ ಶಿವಶರಣ ಕಂಡಾನು
ಈ ವಚನವು ನಮ್ಮಪುರಾತರು ಮರ್ತ್ಯಕ್ಕೆ ಬರುವಂದಿಗೆ
ಈ ವಚನ ನೆಟ್ಟನೆ ಕಂಡುದೆ ಕುರುಹು