Index   ವಚನ - 55    Search  
 
ಪರರಾಸೆಯೆಂಬ ಜ್ವರ ಹತ್ತಿತ್ತಾಗಿ, ಕಳವಳಿಸಿ, ನುಡಿವೆನಯ್ಯಾ. ಹೊನ್ನು ಹೆಣ್ಣು ಮಣ್ಣು ಬಯಸಿ, ವಿಕಳಗೊಂಡಂತೆ ಪ್ರಳಾಪಿಸಿ, ವಿಕಳಂಗೊಂಡು ನುಡಿಯುತ್ತಿರ್ಪೆನಯ್ಯಾ. ಈ ಕಳವಳವನಳಿದು, ಸಂಭಾಷೆಯನಿತ್ತು, ನಿಮ್ಮ ಕರುಣಾಮೃತವೆಂಬ ಕಷಾಯವನೆರದು, ಪರರಾಸೆಯೆಂಬ ಜ್ವರವ ಮಾಣಿಸು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.