ಬಿಡಿ ಬಿಡಿ ವಿಷ್ಣುವ, ನಿಮಗೆ ಗತಿಗೆ ಸಾಧನವಲ್ಲ,
ಕಂಡಿರೆ ಎಲೆ ದ್ವಿಜರಿರಾ.
ಬಿಡದೆ ಧ್ಯಾನಿಸಿ ಶಿವನ ಅಡಿದಾವರೆಯ,
ಬಿಡದೆ ಪೂಜಿಸಿ ಶಿವನ ಶ್ರೀಪಾದಪದ್ಮಂಗಳ
ನಿಮಗೆ ತಡೆಯಿಲ್ಲದ ಮುಕ್ತಿದೊರಕೊಂಬದು. ಅಥರ್ವಣವೇದ:
ಈಶಾನಃ ಶಿವ ಏಕೋಧ್ಯೇಯ' ಶಿವಂಕರತ್ಸರ್ವಮನ್ಯತ್ಪರಿತ್ಯಜ್ಯ
ಇತಿ ಬ್ರಹ್ಮನೀತಿಯಲಿ:
ಆತ್ಮ ಸರ್ವಂ ಪರಿತ್ಯಜ್ಯ ಶಿವಾದನ್ಯಂತು ದೈವತಂ
ತಮೇವ ಶರಣಂ ಚೇತ್ಸದ್ಯೋಮುಕ್ತಿಂ ಸುಗಚ್ಛತಿ ||
ಕೆಡಬೇಡ, ಸಾರಿ ಡಂಗುರ ಹೋಯ್ಯಿತ್ತು, ಶ್ರುತಿಯ ನೋಡಯ್ಯ.
ಬಸವಪ್ರಿಯ ಕೂಡಲ ಚೆನ್ನಸಂಗಯ್ಯನನೆ
ಬಿಡದೆ ಧ್ಯಾನ ಪೂಜೆಯ ಮಾಡಲು
ಕೊಡುವ ನಿಮಗೆ ಪರಮಪದವನು.