ಬ್ರಹ್ಮವಿಷ್ಣ್ವಾದಿ ದೇವತೆಗಳಿಗೆ ಶಿವನೆ ಜನಕನೆಂಬ
ಯಜುರ್ವೇದವ ಕೇಳಿರೆ ದ್ವಿಜರೆಲ್ಲರೂ.
ಅದೆಂತೆಂದಡೆ:
ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾಪೃಥಿವ್ಯಾ
ಜನಿತಾಗ್ನಿರ್ಜನಿತಾ ಸೂರ್ಯಶ್ಚ ಜನಿತೇಂದ್ರೋ ಜನಿತಾಥ ವಿಷ್ಣೋಃ ||
ಮತ್ತಂ ಆದಿತ್ಯಪುರಾಣೇ:
ಉಮಯಾ ಸಹಿತಃ ಸೋಮಃ ಸೋಮೇತುಚ್ಯ
ಸ್ವಯೇವ ಕಾರಣಂ ನಾನ್ಯೋ ವಿಷ್ಣೋರಪಿ ಚ ವೈ ಶ್ರುತಿಃ ||
ಮತೀನಾಂಚ ದಿವಃ ಪೃಥ್ವ್ಯಾ ವಹ್ನೇಃ ಸೂರ್ಯಸ್ಯ ವಜ್ರಿಣಃ ||
ಸಾಕ್ಷಾದಪಿಚ ವಿಷ್ಣೋರ್ವೈ ಸೋಮೀ ಜನಯಿತೇಶ್ವರ ||
ಎಂದುದಾಗಿ, ಮತ್ತೆ ದೈವವುಂಟೆಂಬ
ಅಜ್ಞಾನಿ ಜಾತ್ಯಂಧರ ನಾನೇನೆಂಬೆ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Brahmaviṣṇvādi dēvategaḷige śivane janakanemba
yajurvēdava kēḷire dvijarellarū.
Adentendaḍe:
Sōmaḥ pavatē janitā matīnāṁ janitā divō janitāpr̥thivyā
janitāgnirjanitā sūryaśca janitēndrō janitātha viṣṇōḥ ||
mattaṁ ādityapurāṇē:
Umayā sahitaḥ sōmaḥ sōmētucya
svayēva kāraṇaṁ nān'yō viṣṇōrapi ca vai śrutiḥ ||
matīnān̄ca divaḥ pr̥thvyā vahnēḥ sūryasya vajriṇaḥ ||
sākṣādapica viṣṇōrvai sōmī janayitēśvara ||
endudāgi, matte daivavuṇṭemba
ajñāni jātyandhara nānēnembe,
basavapriya kūḍalacennasaṅgamadēvā.