Index   ವಚನ - 59    Search  
 
ಬ್ರಹ್ಮವಿಷ್ಣ್ವಾದಿ ದೇವತೆಗಳಿಗೆ ಶಿವನೆ ಜನಕನೆಂಬ ಯಜುರ್ವೇದವ ಕೇಳಿರೆ ದ್ವಿಜರೆಲ್ಲರೂ. ಅದೆಂತೆಂದಡೆ: ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾಪೃಥಿವ್ಯಾ ಜನಿತಾಗ್ನಿರ್ಜನಿತಾ ಸೂರ್ಯಶ್ಚ ಜನಿತೇಂದ್ರೋ ಜನಿತಾಥ ವಿಷ್ಣೋಃ || ಮತ್ತಂ ಆದಿತ್ಯಪುರಾಣೇ: ಉಮಯಾ ಸಹಿತಃ ಸೋಮಃ ಸೋಮೇತುಚ್ಯ ಸ್ವಯೇವ ಕಾರಣಂ ನಾನ್ಯೋ ವಿಷ್ಣೋರಪಿ ಚ ವೈ ಶ್ರುತಿಃ || ಮತೀನಾಂಚ ದಿವಃ ಪೃಥ್ವ್ಯಾ ವಹ್ನೇಃ ಸೂರ್ಯಸ್ಯ ವಜ್ರಿಣಃ || ಸಾಕ್ಷಾದಪಿಚ ವಿಷ್ಣೋರ್ವೈ ಸೋಮೀ ಜನಯಿತೇಶ್ವರ || ಎಂದುದಾಗಿ, ಮತ್ತೆ ದೈವವುಂಟೆಂಬ ಅಜ್ಞಾನಿ ಜಾತ್ಯಂಧರ ನಾನೇನೆಂಬೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.