ಬ್ರಾಹ್ಮಣ ದೇಹಿಕದೇವನಲ್ಲ, ಕ್ಷತ್ರಿಯ ದೇಹಿಕದೇವನಲ್ಲ.
ಭಕ್ತ ದೇಹಿಕದೇವನೆಂದು ಕೇಳಿದ ಅರಿಯವೊ,
ಶ್ವಪಚನಾದಡೇನು ಲಿಂಗಭಕ್ತನೆ ಕುಲಜನೆಂಬುದು.
ಶ್ವಪಚೋಪಿ ಮುನಿಶ್ರೇಷ್ಠಃ ಭಕ್ತಿಹೀನಃ ಪಿತಾಪಿ ವಾ |
ಚತುರ್ವೇದಧರೋ ವಿಪ್ರ ಶೈವಭಕ್ತಿವಿವರ್ಜಿತಃ |
ಇದು ಕಾರಣ, ಬಸವಪ್ರಿಯ ಕೂಡಲಚೆನ್ನಸಂಗ
ಹಿತನೆಂದು ಅಂಜುವೆ ಮತ್ತೆ ಮರೆವೆ.
Art
Manuscript
Music
Courtesy:
Transliteration
Brāhmaṇa dēhikadēvanalla, kṣatriya dēhikadēvanalla.
Bhakta dēhikadēvanendu kēḷida ariyavo,
śvapacanādaḍēnu liṅgabhaktane kulajanembudu.
Śvapacōpi muniśrēṣṭhaḥ bhaktihīnaḥ pitāpi vā |
caturvēdadharō vipra śaivabhaktivivarjitaḥ |
idu kāraṇa, basavapriya kūḍalacennasaṅga
hitanendu an̄juve matte mareve.