Index   ವಚನ - 60    Search  
 
ಬ್ರಾಹ್ಮಣ ದೇಹಿಕದೇವನಲ್ಲ, ಕ್ಷತ್ರಿಯ ದೇಹಿಕದೇವನಲ್ಲ. ಭಕ್ತ ದೇಹಿಕದೇವನೆಂದು ಕೇಳಿದ ಅರಿಯವೊ, ಶ್ವಪಚನಾದಡೇನು ಲಿಂಗಭಕ್ತನೆ ಕುಲಜನೆಂಬುದು. ಶ್ವಪಚೋಪಿ ಮುನಿಶ್ರೇಷ್ಠಃ ಭಕ್ತಿಹೀನಃ ಪಿತಾಪಿ ವಾ | ಚತುರ್ವೇದಧರೋ ವಿಪ್ರ ಶೈವಭಕ್ತಿವಿವರ್ಜಿತಃ | ಇದು ಕಾರಣ, ಬಸವಪ್ರಿಯ ಕೂಡಲಚೆನ್ನಸಂಗ ಹಿತನೆಂದು ಅಂಜುವೆ ಮತ್ತೆ ಮರೆವೆ.