Index   ವಚನ - 61    Search  
 
ಭಕ್ತರಿಗೆ ಮಾಡಿ ಕಣ್ಣುಕಾಲು ಕೈಗಳ ಪಡೆದರು, ಭಕ್ತರಿಗೆ ಮಾಡಿ ಅರಿದ ತಲೆಯ ಪಡೆದರು, ಭಕ್ತರಿಗೆ ಮಾಡಿ ನಿಲವೆರಸಿ ಹೋದರು. ಮುನ್ನ ಭಕ್ತರಲ್ಲದವರಿಗೆ ಮಾಡಿ ಹಡೆದವರುಂಟೆ ಹೇಳಾ? ಭಕ್ತರಿಗೆ ಮಾಡಿ ಇವೆಲ್ಲವ ಹಡೆಯಿತ್ತ ಕಂಡು ನಂಬದೆನ್ನ ಬೆಂದ ಮನ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.