ಮನಕ್ಕೆ ಮನ ಒಂದಾಗಿ, ಭಾವಕ್ಕೆ ಭಾವ ಒಂದಾಗಿ,
ನಚ್ಚಿ ಮಚ್ಚಿದ ಶರಣರ ದರುಶನವಾದ ಬಳಿಕ,
ಎತ್ತಲೆಂದರಿಯೆನಯ್ಯಾ ಲೌಕಿಕವ.
ಬಸವಪ್ರಿಯ ಕೂಡಲಚೆನ್ನಸಂಗಾ,
ನಿಮ್ಮ ಶರಣ ಪ್ರಭುದೇವರಿಗೆ
ಶರಣೆಂಬುದಲ್ಲದೆ ಅನ್ಯವನೇನೆಂದೂ ಅರಿಯೆನು.
Art
Manuscript
Music
Courtesy:
Transliteration
Manakke mana ondāgi, bhāvakke bhāva ondāgi,
nacci maccida śaraṇara daruśanavāda baḷika,
ettalendariyenayyā laukikava.
Basavapriya kūḍalacennasaṅgā,
nim'ma śaraṇa prabhudēvarige
śaraṇembudallade an'yavanēnendū ariyenu.