ಮತ್ತೆಯು ಸಮಸ್ತವಾದ ಕರ್ಮಕೃತ ಶರೀರಿಗಳಿಗೆ
ಭೋಗವುಳ್ಳುದೆ ತಪ್ಪದೆಂಬೆಯಾದಡೆ,
ಶರೀರಗಳಿಗಾಗಲಿ ಪ್ರೇರಕಹರ್ತುದಿಂದಲ್ಲವೆಂಬುದೆ ಪ್ರಮಾಣ.
ಶಿವ ಪ್ರೀತ್ಯರ್ಥವಾದಗಳು ಕರ್ತವನೆಯ್ದುವವೆಂಬುದಕ್ಕೆ ಪ್ರಮಾಣವು ಎನಲು,
ಪಿತೃವಧೆಯಿಂದ ಚಂಡೇಶ್ವರನು ಅನುಪಮ ಗಣಪದವನೈದಿದನು.
ಸಿರಿಯಾಳನು ತನ್ನ ಮಗನನೆ ಹತಿಸಿ ಪುರಜನ ಬಾಂಧವರುಸಹಿತ
ಶಿವಲೋಕವನೈದನೆ?
ಕಾಲಾಂತರದಲ್ಲಿ ಮನುಚೋಳನು ಪುತ್ರವಧೆ ಭ್ರೂಣಹತ್ಯವನು ಮಾ ಎಸಗಿ,
ತನುವರಸಿ ಶಿವಲೋಕವೆಯ್ದನೆ?
ಅಯ್ಯೋಮ ರಾಜನು ವಿಪ್ರೋತ್ತಮನನೆ ವಧಿಸಿ ಲಿಂಗ ಗರ್ಭಾಂತರವನೆಯ್ದಿದನೆ?
ಅಂದು ಜಗವರಿಯಲದಂತಿರಲಿ.
`ಸ್ವರ್ಗಕಾಮೋ ಯಜೇತ'ಯೆಂಬ ಶ್ರುತಿಪ್ರಮಾಣಿಂ
ದಕ್ಷ ಪ್ರಜಾಪತಿ ಕ್ರಿಯೆಗಳಿಗೆ
ಅಧ್ವರ ಕರ್ಮದಿಂದ ಶಿರಚ್ಛೇದಿಯಾಗಿ ಕುರಿದಲೆ ಪಡೆಯನೆ?
ಬರೀ ಅಚೇತನ ಕರ್ಮಂಗಳು ಕೊಡಬಲ್ಲವೆ ಸದ್ಗತಿ ದುರ್ಗತಿಗಳನು?
ಕರ್ತೃ ಪ್ರೇರಕ ಶಿವನಲ್ಲದೆ,
`ಮನ್ನಿಮಿತ್ತಕೃತಂ ಪಾಪಮಪೀಡಾವಚಯೈ ಕಲ್ಪ್ಯತೇ' ಎನಲು,
ಇಂತೀ ಚಿಟಿಮಿಟಿವಾದವೆಂಬುದು ಕೊಳ್ಳವು ಕೇಳಾ.
ಶಿವಭಕ್ತಿಯೆಂಬ ಪ್ರಚಂಡ ರವಿಕಿರಣದ
ಮುಂದೆ ಸಾಮಾನ್ಯ ಕರ್ಮವೆಂಬ ತಮ ನಿಲುವುದೆ?
ಮರುಳೆ ಆ `ವೋರಾಜಾನಮಧ್ವರಸ್ಯ ರುದ್ರಗಂ' ಎನಲು,
`ಇಂದ್ರ ಉಪೇಂದ್ರಾಯ ಸ್ವಾಹಾ' ಎನಬಹುದೆ?
ಪ್ರಥಮಾಹುತಿಯಲ್ಲಿಯೆಂದು ಬೆಳಲು ಭಸ್ಮವಹವಾ ಆಹುತಿ ಫಲಂಗಳು.
ಆದಡೆ ಕೆಳೆಯಾ ಶಿವಭಕ್ತಿ ಬಾಹ್ಯವಾದ
ಪಾಪಕರ್ಮಕೆ ಬಂದ ವಿಪರೀತ ಪ್ರಾಪ್ತಿಗಳು,
ವಿಷ್ಣು ಸುರರಿಗೆ ಹಿತವಾಗಿ ಭೃಗು ಸತಿಯ ಶಿರವನರಿದಡೆ,
ಕರ್ಮ ದಶಜನ್ಮಂಗಳಿಗೆ ತಂದು,
ಹೀನಪ್ರಾಣಿಗಳ ಯೋನಿಯಲ್ಲಿ ಬರಸಿದುದನರಿಯಿರೆ.
ಮತ್ತೆಯೂ ಬಾಲೆಯ ಕೊಂದ ಕರ್ಮ
ಕೃಷ್ಣಾವತಾರದಲ್ಲಿ ವ್ಯಾಧನಿಂದ ತನ್ನ ಕೊಲ್ಲಿಸಿತ್ತು.
ಮತ್ತೆಯೂ ಬಲಿಯ ಬಂಧಿಸಿದ ಕರ್ಮ ಮುಂದೆ ನಾಗಾರ್ಜುನನಿಂದ ಕಟ್ಟಿಸಿತ್ತು,
ಕೌರವಕುಲದ ಕೊಲಿಸಿದ ಕರ್ಮಫಲ ತನ್ನ ಯಾದವ ಕುಲವ ಕೊಲಿಸಿತ್ತು.
ಮತ್ತಾ ಲೀಲೆಯಿಂದ ಮತ್ತೆಯೂ ಪರ್ವತನಾರಂದರ ಸತಿಯ ಬಲುಮೆ,
ಇಂತೆ ಕೊಂಡ ಕರ್ಮಫಲ ರಾವಣಗೊಪ್ಪಿಸಿತ್ತು.
ತನ್ನ ಪ್ರಿಯತಮೆಯೆನಿಸುವ ಸೀತಾಂಗನೆಯ
ಇನ್ನು ಮಿಕ್ಕಿನ ದೇವದಾನವಮಾನವರನೊಕ್ಕಲಿಕ್ಕಿಯಾಡದಿಹುದೆಯಾ ಕರ್ಮವು.
ಆದಡಾ ಕರ್ಮವು ಸ್ವತಂತ್ರವೋ, ಪರತಂತ್ರವೋ ಎಂಬೆಯಾದಡೆ,
ಆ ಕರ್ಮ ಈಶ್ವರಾಜ್ಞೆಯಲ್ಲದ ಕರ್ಮಿ ತಾನಾದಂತೆ,
ಇದಂ ಗುರು ಕನಿಷ್ಠಾಧಮಮಧ್ಯಮ ಕ್ರಿಯೆಗಳಿಂ ವಿಧಿಸಿದ ವಿಧಿಗಳಿಂ,
ವಿಧಿನಿಷೇಧ ಕರ್ಮಂಗಳೆಂಬ ಸಮೂಹಕರ್ಮಗಳಿಗೆ ತಾರತಮ್ಯವಿಡಿದು,
ಪುಣ್ಯಪಾಪಂಗಳ ನಿರ್ಮಿಸಿ, ಅಜ್ಞಾನಿಪಿತವ ಮಾಡಿದನೀಶ್ವರನು.
ನಾಕನರಕಾದಿಗಳೆ ಸಾಧನವಾಗಿ, ಕರ್ಮಕರ್ತನನೆಯ್ದುವರೆ,
ಕರ್ಮ ಕರ್ತನು ಈಶ್ವರನಾದಡೆ ಕರ್ಮನಿ ಶ್ವರಾಜ್ಞೆಯಿಂದೈದುವಡೆ,
ಆ ಕರ್ಮ ಕರ್ತನಹ ಈಶ್ವರನನು ಬ್ರಹ್ಮನ ಮೇಲ್ದಲೆಯನರಿದುದಲಾ.
ಆ ಕರ್ಮ ಆತನನೆಯ್ದುದುಮೆನಲು, ಅಹಂಗಾಗದು.
ವಿರಿಂಚನು ರಜೋಗುಣಹಂಕಾರದಿಂ
ಸುರ ಕಿನ್ನರ ಗರುಡ ಗಾಂಧರ್ವ ಸಿದ್ಧ ವಿದ್ಯಾಧರರು
ತಮ್ಮೊಳು ಬ್ರಹ್ಮವಾದದಿಂ ಸಂಪಾದಿಸಿ
ತಿಳಿಯಲರಿಯದೆ, ಬ್ರಹ್ಮನಂ ಬೆಸಗೊಳಲು,
ಬೊಮ್ಮವಾನೆನಲು, ಆ ಕ್ಷಣಂ ಗಗನದೊಳು ತೋರ್ಪ
ಅತ್ಯನುಪಮ ದೇದೀಪ್ಯಮಾನ ತೇಜಃಪುಂಜ
ಜ್ಯೋತಿರ್ಲಿಂಗಾಕಾರಮಂತೋರಲಾ
ಬ್ರಹ್ಮೇಶ್ವರರು ಆ ವಸ್ತುನಿರ್ದೇಶಮಂ ಮಾಳ್ಪೆನೆಂದು
ಪಿತಾಮಹನು ಚತುಸ್ಶಿರ ಮಧ್ಯದಲ್ಲಿ ಮೇಲ್ದಲೆಯಂ ಪುಟ್ಟಿಸಿ,
||ಶ್ರುತಿ|| `ಋತಂ ಸತ್ಯಂ ಪರಂ ಬ್ರಹ್ಮ'ಯೆಂದು
ಋಗ್ಯಜುಸ್ಸಿನಲ್ಲಿ ನುತಿಸುತ್ತಂ
ಇರಲು,
ಬ್ರಹ್ಮಾಧಿಪತಿ ತತ್ಪರ ಬ್ರಹ್ಮಶಿವ ಇತಿ ಒಂ, ಇತಿ ಬ್ರಹ್ಮಾ ಇತಿ.
ಇಂತೀ ಶ್ರುತಿ ಸಮೂಹವೆಲ್ಲವು ಶಿವನನೆ ಪರಬ್ರಹ್ಮವೆಂದು ಲಕ್ಷಿಸಿ,
ಮತ್ತತನದಿಂ ಮರದೂ ಅಬ್ರಹ್ಮವೆನಲುಂ
ದ್ರುಹಿಣನ ಮೇಲ್ದಲೆಯಂ ಅಪ್ರತಿಮ ತೇಜೋಮಯ ಲೀಲಾಲೋಲಾ ಶೀಲ
ದುಷ್ಟನಿಗ್ರಹಿ ಶಿಷ್ಟ ಪ್ರತಿಪಾಲಕನನೆಯಾಕ್ಷಣಂ,
ಘನರೌದ್ರ ಕೋಪಾಟೋಪಿಯೆನಿಸುವ ಕಾಲರುದ್ರಂ ಸಮೀಪಸ್ಥನಾಗಿರ್ದು,
ಜ್ಯೇಷ್ಠಾ ತರ್ಜನಾಂಗುಲಿ ನಖಮುಖದಿಂ ಛೇದಿಸಲು,
ವಿಧಿ ಭಯಾತುರನಾಗಿ `ಓಂ ನಮೋ ದೇವಾಯ ದೇವ್ಯೈ ನಮಃ,
ಸೋಮಾಯ ಉಮಾಯೈ ನಮಃ'
ಎಂದು ಸೋಮಾಷ್ಟಕದಿಂ ಸ್ತುತಿಸಿ, ನಮಿಸಿಯಜಿಸಿ ಮೆಚ್ಚಿಸಿ,
ಸ್ವಾಮಿ ಸರ್ವೆಶ್ವರ, ಯ್ಯೋಮಕೇಶ, ದೇವದೇವ ಮಹಾಪ್ರಸಾದ.
ಈ ಶಿರಮಂ ಬಿಸಾಟದಿರಿ, ಬಿಸಾಟಲು ಪುರತ್ರಯ ಜಗಮಳಿಗುತ್ತಂ ನಿಮಿತ್ತಂ
ಪರಮ ಕೃಪಾನಿಧಿ ಪರಬ್ರಹ್ಮ ಪರಂಜ್ಯೋತಿ ಪರಮೇಶ್ವರ ಪರಮಭಟ್ಟಾರಕ
ಪರಾತ್ಪರತರಸದಕ್ಷರ ಚಿನ್ಮೂರ್ತಿ ಸ್ವಯಂಭೋ
ಸ್ವಾತಂತ್ರೇಶ್ವರಾಯೆನುತ ಕೀರ್ತಿಸುತ್ತಿರಲು,
ಪರಬ್ರಹ್ಮ ನಿರೂಪದಿಂ ಕಾಲರುದ್ರನ ಕಪಾಲಮಂ ಧರಿಸಿದನಂದು.
ಇನ್ನೆಮಗಿದೆ ಮತವೆಂದು ಸರ್ವದೆ ತಾ ಗರ್ವ ಕಂಡೂಷಮಂ
ಉರ್ಮಿಯೊಳೀಗಮೆ ತೀರ್ಚಿಪೆನೆಂದು
ಪಿಡಿದು ನಡೆದಂ ಭಿಕ್ಷಾಟನಕಂದು.
ಅಹಲ್ಯೆ ಸಾಯಿತ್ತಿದು, ಕರ ಹೊಸತು ಇನಿತರಿಂದ ಕಾಲರುದ್ರಂಗೆ
ಬ್ರಹ್ಮೇತಿಯಾಯಿತ್ತೆಂಬ ಕರ್ಮವಾದಿ ಕೇಳಾದಡೆ.
||ಶಾಮಶ್ರುತಿ|| `ತ್ವಂ ದೇವೇಷು ಬ್ರಾಹ್ಮಣಾಹ್ವಯಃದುನುಷ್ಯೋಮನುಷ್ಯೇಮ
ಬ್ರಾಹ್ಮಣಾಮುಪದಾವತ್ಯುಪದಾರತ್ಯಾ' ಎನಲು,
`ಬ್ರಾಹ್ಮಣೋ ಭಗವಾನ್ ರುದ್ರಃ' ಎನಲು,
`ಕ್ಷತ್ರಿಯಃ ಪರಮೋ ಹರಿಃ' ಎನುತಿರಲು,
`ಪಿತಾಮಹಸ್ತು ವೈಶ್ಯಸಾತ್' ಎನಲು,
ಬ್ರಾಹ್ಮಣೋತ್ತಮ ಬ್ರಾಹ್ಮಣಾದಿ ಪತಿ ಪರಬ್ರಹ್ಮವಿದ್ದಂತೆ.
ತಾನೆ ಪರಬ್ರಹ್ಮಮೆನಲಾ ವಿಧಿಯ ಶಿಕ್ಷಿಪದು ವಿದಿತವಲ್ಲದೆ ನಿಷೇಧವಲ್ಲ.
ಅದೆಂತೆನಲು, ಭೂಚಕ್ರವಳಯದೊಳು
ಭೂಮೀಶನು ಅನ್ಯಾಯಗಳ ಶಿಕ್ಷಿಸಿದ ಭೂರಕ್ಷಣ್ಯವು,
ಲೋಕಹಿತವಲ್ಲದೆ ದೋಷ ಸಾಧನಮೆಯೆಲ್ಲಾ,
ಪಾಪಿಗೆ ತಕ್ಕ ಪ್ರಾಯಶ್ಚಿತ್ತಮೆಂದುಂಟಾಗಿ.
ಇದು ಕಾರಣ, ಶಿಕ್ಷಯೋಗ್ಯನ ಶಿಕ್ಷಿಸಿದವದ
ದೋಷವಿಲ್ಲೆಂದು ಭಾಟ್ಠ(?) ದೊಳೊಂದು ಪಕ್ಷಮಿರೆ,ಮತ್ತಮದಲ್ಲದೆ,
ಅದೊಮ್ಮೆ ಹತ್ತುತಲೆಯವನಂ ಅತ್ಯುಗ್ರದಿಂ ವಂದಿಸಿದ ಶ್ರೀರಾಮಂಗೆ
ಬ್ರಹ್ಮಹತ್ಯಾ ಬ್ರಹ್ಮಕರ್ಮ ವಿದ್ಯಾಬ್ರಹ್ಮರಿಂದಾವಾವ
ಪ್ರಾಯಶ್ಚಿತ್ತದಿಂತೆಮ್ಮನೆ ಕೆಡದಿರಲು,
ಆ ರಾಮಂ ಆ ರಾವಣಹತ ದೋಷನಿರುಹರಣಕ್ಕಾವುದು ಕಾಣದಿರಲು,
ಶಂಭುಪೌರಾಣಿಕನೆಂಬ ನಾಮವಂ ತಾಳ್ದು, ಶಿವಂ ರಾಮಂಗೆ ಪ್ರತ್ಯಕ್ಷಮಾಗಿ,
ಈ ದೋಷಕ್ಕೆ ಲಿಂಗಪ್ರತಿಷ್ಠೆಯ ನಿರೋಹರಣಮೆಂದರುಪಿ,
ಅರಿದಾ ರಾಮಂಗಂ ಗಂಧಮಾದ[ನ] ಪರ್ವತವೇ ಆದಿಯಾಗಿ,
ಅದನು ಕೋಟೆಯ ಅವಧಿಯಾಗಿ
ಶಿವಲಿಂಗಪ್ರತಿಷ್ಠೆಯಂ ಮಾಡೆ,
ರಾಮೇಶ್ವರಲಿಂಗಮೆನಿಪ್ಪ ನಾಮಾಂಕಿತದಿಂ ತವಕ ಮಿಗೆವರಿದು
ಸ್ವಾತ್ವಿಕಭಕ್ತಿಭಾವದಿಂದರ್ಚಿಸಿ ಸ್ತುತಿಸಿ,
ಭೂವಳಯದೊಳೆಲ್ಲಂ ಪ್ರದಕ್ಷಿಣ ಮುಖದಿಂ ಶಿವಲಿಂಗಾಲಯಮನೆತ್ತಿಸಿ,
ಅಂತಾ ಸಹಸ್ರಾವಧಿಯೆನಿಸುವ ದಶಗ್ರೀವ ವಧೆಯಂ ಪರಿಹರಿಸಿದ ಹಾಗೆ,
ಶ್ರೀಮನ್ಮಹಾದೇವನೂ ದೇವಾದಿದೇವನೂ
ದೇವಚಕ್ರವರ್ತಿ ದೇವಭಟ್ಟಾರಕನೂ
ದೇವವೇಶ್ಯಾಭುಜಂಗನೂ ಸರ್ವದೇವತಾ ನಿಸ್ತಾರಕನೂ
ಸರ್ವದೇವತಾ ಯಂತ್ರವಾಹಕನೂ ಒಂದಾನೊಂದೆಡೆಯಲ್ಲಿ
ಮಹಾದೇವೇಶ್ವರನು ರುದ್ರೇಶ್ವರನು ಈಶ್ವರೇಶ್ವರನು
ಶಂಕರೇಶ್ವರನೆನಿಪ ನಾಮಂಗಳಿಂ,
ಭೂವಳಯದೊಳು ಲಿಂಗಪ್ರತಿಷ್ಠೆಯಂ ಬ್ರಹ್ಮಶಿರಚ್ಛೇದನ
ನಿಮಿತ್ಯನಂ ಮಾಡಿದುದುಳ್ಳಡೆ,ಹೇಳಿರೆ ಕರ್ಮವಾದಿಗಳು.
ಅಂತುಮದಲ್ಲದೆಯುಂ ಆ ಉಗ್ರನಿಂದಂ
ಪಿತಾಮಹಂ ಅವಧಿಗಡಿಗೆ ಮಡಿವುದಂಕೇಳ್ದರಿಯಿರೆ.
ಅದಲ್ಲದೆಯುಂ, ದಕ್ಷಾಧ್ವರದೊಳಾ ದಕ್ಷ ಪ್ರಜಾಪತಿಯ ಶಿರವನರಿದು,
ಕರಿಯದಲೆಯನೆತ್ತಿಸಿದ.
ಅದಲ್ಲದೆಯುಂ ಸುತೆಗಳುಪಿದ ವಿರಂಚಿ ಹತಿಸಿದಂದು,
ಅದಲ್ಲದೆಯುಂ ಸಮಸ್ತದೇವತೆಗಳ
ಆಹಾರ ತೃಪ್ತಿಗೆ ಬೇಹ ಅಮೃತತರನಂ
ಚರಣಾಂಗುಷ್ಠದಿಂದೊರಸಿದಂದು,
ಅದಲ್ಲದೆಯುಂ ವಿಷ್ಣು ತಾನೆಯೆನಿಪ ವಿಶ್ವಕ್ಸೇನನ
ತ್ರಿಶೂಲದಿಂದಿರಿದೆತ್ತಿ ಹೆಗಲೊಳಿಟ್ಟಂದು,
ಅದಲ್ಲದೆಯುಂ ಮತ್ಸ್ಯ ಕೂರ್ಮ
ವರಾಹ ನಾರಸಿಂಹ ತ್ರಿವಿಕ್ರಮಾದಿಗಳಂ
ಮುಂದುವರಿದು ಕೊಂದಂದು
ಅದಲ್ಲದೆಯುಂ ದೇವಿದ್ವಿಜರಿಗೆ ಗುರುವೆನಿಸುವ ಪಾವಕನ
ಏಳು ನಾಲಿಗೆಗಳ ಕೀಳುವಂದು,ಅದಲ್ಲದೆಯುಂ
ಯಜ್ಞವಾಟದೊಳು ಪ್ರಾಜ್ಞನೆನಿಸುವ ಪೂಶಾದಿತ್ಯನ ಹಲ್ಲ ಕಳೆದು,
ಭಾಗಾದಿತ್ಯನಂ ಮೀಂಟಿ ವಾಣಿಯ ಮೂಗಂ ಮಾಣದೆ ಕೊಯ್ದ,
ದೇವಮಾತೃಕೆಯರ ಮೊಲೆ ನಾಶಿಕವ ಚಿವುಟಿದಂದು,
ಅದಲ್ಲದೆಯುಂ ಬ್ರಹ್ಮಾಂಡ ಕೋಟಿಗಳನೊಮ್ಮೆ
ನಿಟಿಲತಟನಯನಂ ಲಟಲಟಿಸಿ ಶೀಘ್ರದಿಂದ ಸುಡಲು,
ಸುರಾಸುರ ಮುನಿನಿವಹ ಹರಿಹಿರಣ್ಯಗರ್ಭರು
ಶತಕೋಟಿ ಹತವಾದಂದು,
ಪ್ರೊರ್ದದಾ ಬ್ರಹ್ಮಹತ್ಯಂ ನಿರ್ಧರಮಾಗಿ
ಬೊಮ್ಮನ ಮೇಲ್ದಲೆಯೊಂದ ಚಿವುಟಿದುದರಿಂದಂ
ಒಮ್ಮೆಯೆ ಶೂಲಪಾಣಿಗೆ
ಬ್ರಹ್ಮೇತಿಯಾದುದತಿಚೋದ್ಯ ಚೋದ್ಯ.
ಅವಲ್ಲದೆಯೂ ಬ್ರಹ್ಮ ಸಾಯನು.
ಅಂಗಹೀನಮಾದುದಲ್ಲದೆ ಹೋಗಲಾ
ಸಾಮಾನ್ಯ ಚರ್ಚೆ ಕರ್ಮಗತ
ಕರ್ಮಿಯೆನಿಸುವ ನಿನ್ನ ಕರ್ಮವಾದವೆಲ್ಲಿಗೂ ಸಲ್ಲದು.
ಬ್ರಹ್ಮಮಸ್ತಧಾರಣ ಲೀಲಾಲೋಲ ಶೀಲಬ್ರಹ್ಮೇಶ್ವರ ಪರಬ್ರಹ್ಮ
ಶ್ರೀಮನ್ಮಹಾದೇವನ ನಾಮಕೀರ್ತನ
ಮಾತ್ರದಿಂದು ಬ್ರಹ್ಮಹತ್ಯಕೋಟಿಗಳುಂ
ಮಹಾಪಾತಕವಗಣಿತಂ ನಿರಿಗೆಣೆಯಾದಕೂಲಮಂ
ಭರದೊಳನಲ ಗ್ರಹಿಸಿದಂತಾಗುಮೆನೆ.
ಬ್ರಹ್ಮ ಪಂಚಬ್ರಹ
Art
Manuscript
Music
Courtesy:
Transliteration
Matteyu samastavāda karmakr̥ta śarīrigaḷige
bhōgavuḷḷude tappadembeyādaḍe,
śarīragaḷigāgali prērakahartudindallavembude pramāṇa.
Śiva prītyarthavādagaḷu kartavaneyduvavembudakke pramāṇavu enalu,
pitr̥vadheyinda caṇḍēśvaranu anupama gaṇapadavanaididanu.
Siriyāḷanu tanna maganane hatisi purajana bāndhavarusahita
śivalōkavanaidane?
Kālāntaradalli manucōḷanu putravadhe bhrūṇahatyavanu mā esagi,
tanuvarasi śivalōkaveydane?
Ayyōma rājanu viprōttamanane vadhisi liṅga garbhāntaravaneydidane?
Andu jagavariyaladantirali.
`Svargakāmō yajēta'yemba śrutipramāṇiṁ
Dakṣa prajāpati kriyegaḷige
adhvara karmadinda śiracchēdiyāgi kuridale paḍeyane?
Barī acētana karmaṅgaḷu koḍaballave sadgati durgatigaḷanu?
Kartr̥ prēraka śivanallade,
`mannimittakr̥taṁ pāpamapīḍāvacayai kalpyatē' enalu,
intī ciṭimiṭivādavembudu koḷḷavu kēḷā.
Śivabhaktiyemba pracaṇḍa ravikiraṇada
munde sāmān'ya karmavemba tama niluvude?
Maruḷe ā `vōrājānamadhvarasya rudragaṁ' enalu,
`indra upēndrāya svāhā' enabahude?
Prathamāhutiyalliyendu beḷalu bhasmavahavā āhuti phalaṅgaḷu.
Ādaḍe keḷeyā śivabhakti bāhyavāda
pāpakarmake banda viparīta prāptigaḷu,
viṣṇu surarige hitavāgi bhr̥gu satiya śiravanaridaḍe,
karma daśajanmaṅgaḷige tandu,
hīnaprāṇigaḷa yōniyalli barasidudanariyire.
Matteyū bāleya konda karma
kr̥ṣṇāvatāradalli vyādhaninda tanna kollisittu.
Matteyū baliya bandhisida karma munde nāgārjunaninda kaṭṭisittu,
kauravakulada kolisida karmaphala tanna yādava kulava kolisittu.
Mattā līleyinda matteyū parvatanārandara satiya balume,
inte koṇḍa karmaphala rāvaṇagoppisittu.
Tanna priyatameyenisuva sītāṅganeya
Innu mikkina dēvadānavamānavaranokkalikkiyāḍadihudeyā karmavu.
Ādaḍā karmavu svatantravō, paratantravō embeyādaḍe,
ā karma īśvarājñeyallada karmi tānādante,
idaṁ guru kaniṣṭhādhamamadhyama kriyegaḷiṁ vidhisida vidhigaḷiṁ,
vidhiniṣēdha karmaṅgaḷemba samūhakarmagaḷige tāratamyaviḍidu,
puṇyapāpaṅgaḷa nirmisi, ajñānipitava māḍidanīśvaranu.
Nākanarakādigaḷe sādhanavāgi, karmakartananeyduvare,
karma kartanu īśvaranādaḍe karmani śvarājñeyindaiduvaḍe,
ā karma kartanaha īśvarananu brahmana mēldaleyanaridudalā.
Ā karma ātananeydudumenalu, ahaṅgāgadu.
Virin̄canu rajōguṇahaṅkāradiṁ
sura kinnara garuḍa gāndharva sid'dha vidyādhararu
tam'moḷu brahmavādadiṁ sampādisi
tiḷiyalariyade, brahmanaṁ besagoḷalu,
bom'mavānenalu, ā kṣaṇaṁ gaganadoḷu tōrpa
atyanupama dēdīpyamāna tējaḥpun̄ja
jyōtirliṅgākāramantōralā
brahmēśvararu ā vastunirdēśamaṁ māḷpenendu
pitāmahanu catus'śira madhyadalli mēldaleyaṁ puṭṭisi,
||śruti|| `r̥taṁ satyaṁ paraṁ brahma'yendu
r̥gyajus'sinalli nutisuttaṁ
iralu,
Śrīmanmahādēvanū dēvādidēvanū
dēvacakravarti dēvabhaṭṭārakanū
dēvavēśyābhujaṅganū sarvadēvatā nistārakanū
sarvadēvatā yantravāhakanū ondānondeḍeyalli
mahādēvēśvaranu rudrēśvaranu īśvarēśvaranu
śaṅkarēśvaranenipa nāmaṅgaḷiṁ,
bhūvaḷayadoḷu liṅgapratiṣṭheyaṁ brahmaśiracchēdana
nimityanaṁ māḍiduduḷḷaḍe,hēḷire karmavādigaḷu.
Antumadalladeyuṁ ā ugranindaṁ
pitāmahaṁ avadhigaḍige maḍivudaṅkēḷdariyire.
Adalladeyuṁ, dakṣādhvaradoḷā dakṣa prajāpatiya śiravanaridu,
Brahmādhipati tatpara brahmaśiva iti oṁ, iti brahmā iti.
Intī śruti samūhavellavu śivanane parabrahmavendu lakṣisi,
mattatanadiṁ maradū abrahmavenaluṁ
druhiṇana mēldaleyaṁ apratima tējōmaya līlālōlā śīla
duṣṭanigrahi śiṣṭa pratipālakananeyākṣaṇaṁ,
ghanaraudra kōpāṭōpiyenisuva kālarudraṁ samīpasthanāgirdu,
jyēṣṭhā tarjanāṅguli nakhamukhadiṁ chēdisalu,
vidhi bhayāturanāgi `ōṁ namō dēvāya dēvyai namaḥ,
sōmāya umāyai namaḥ'
Endu sōmāṣṭakadiṁ stutisi, namisiyajisi meccisi,
svāmi sarveśvara, yyōmakēśa, dēvadēva mahāprasāda.
Ī śiramaṁ bisāṭadiri, bisāṭalu puratraya jagamaḷiguttaṁ nimittaṁ
parama kr̥pānidhi parabrahma paran̄jyōti paramēśvara paramabhaṭṭāraka
parātparatarasadakṣara cinmūrti svayambhō
svātantrēśvarāyenuta kīrtisuttiralu,
parabrahma nirūpadiṁ kālarudrana kapālamaṁ dharisidanandu.
Innemagide matavendu sarvade tā garva kaṇḍūṣamaṁ
urmiyoḷīgame tīrcipenendu
piḍidu naḍedaṁ bhikṣāṭanakandu.
Ahalye sāyittidu, kara hosatu initarinda kālarudraṅge
Brahmētiyāyittemba karmavādi kēḷādaḍe.
||Śāmaśruti|| `tvaṁ dēvēṣu brāhmaṇāhvayaḥdunuṣyōmanuṣyēma
brāhmaṇāmupadāvatyupadāratyā' enalu,
`brāhmaṇō bhagavān rudraḥ' enalu,
`kṣatriyaḥ paramō hariḥ' enutiralu,
`pitāmahastu vaiśyasāt' enalu,
brāhmaṇōttama brāhmaṇādi pati parabrahmaviddante.
Tāne parabrahmamenalā vidhiya śikṣipadu viditavallade niṣēdhavalla.
Adentenalu, bhūcakravaḷayadoḷu
bhūmīśanu an'yāyagaḷa śikṣisida bhūrakṣaṇyavu,
lōkahitavallade dōṣa sādhanameyellā,
Pāpige takka prāyaścittamenduṇṭāgi.
Idu kāraṇa, śikṣayōgyana śikṣisidavada
dōṣavillendu bhāṭṭha(?) Doḷondu pakṣamire,mattamadallade,
adom'me hattutaleyavanaṁ atyugradiṁ vandisida śrīrāmaṅge
brahmahatyā brahmakarma vidyābrahmarindāvāva
prāyaścittadintem'mane keḍadiralu,
ā rāmaṁ ā rāvaṇahata dōṣaniruharaṇakkāvudu kāṇadiralu,
śambhupaurāṇikanemba nāmavaṁ tāḷdu, śivaṁ rāmaṅge pratyakṣamāgi,
ī dōṣakke liṅgapratiṣṭheya nirōharaṇamendarupi,
aridā rāmaṅgaṁ gandhamāda[na] parvatavē ādiyāgi,
adanu kōṭeya avadhiyāgi
Śivaliṅgapratiṣṭheyaṁ māḍe,
rāmēśvaraliṅgamenippa nāmāṅkitadiṁ tavaka migevaridu
svātvikabhaktibhāvadindarcisi stutisi,
bhūvaḷayadoḷellaṁ pradakṣiṇa mukhadiṁ śivaliṅgālayamanettisi,
antā sahasrāvadhiyenisuva daśagrīva vadheyaṁ pariharisida hāge,
kariyadaleyanettisida.
Adalladeyuṁ sutegaḷupida viran̄ci hatisidandu,
adalladeyuṁ samastadēvategaḷa
āhāra tr̥ptige bēha amr̥tataranaṁ
caraṇāṅguṣṭhadindorasidandu,
adalladeyuṁ viṣṇu tāneyenipa viśvaksēnana
triśūladindiridetti hegaloḷiṭṭandu,
Adalladeyuṁ matsya kūrma
varāha nārasinha trivikramādigaḷaṁ
munduvaridu kondandu
adalladeyuṁ dēvidvijarige gu