ಲಿಂಗ ಮುಟ್ಟಿ ಆಚಮನ ಮಾಡುವರು
ಲಿಂಗಾಂಗಿಗಳಲ್ಲದವರು.
ಮಾಡಿದಡೆಯೂ ಮಾಡಲಿ.
ಲಿಂಗ ಪಾದೋದಕವ ಧರಿಸಿ,
ಮರಳಿ ಅಪವಿತ್ರ ಶಂಕೆಯಿಂದ ಆಚಮನ ಮಾಡಿದಡೆ
ಅಘೋರ ನರಕದಲ್ಲಿಕ್ಕುವದಯ್ಯಾ,
ಆ ಪಾದೋದಕವೆ ವಿಷವಾಗಿ.
ಅದೆಂತೆಂದಡೆ:
ಶಂಭೋಃ ಪಾದೋದಕಂ ಪೀತ್ವಾ ಪಶ್ಚಾದಶುಚಿಶಂಕಯಾ |
ಯ ಆಚಮತಿ ಮೋಹೇನ ತಂ ವಿದ್ಯಾದ್ಬ್ರಹ್ಮ ಘಾತಕಂ ||
ಇಂತೆಂಬ ವಚನವ ಕೇಳಿ ನಂಬುವದಯ್ಯಾ.
ಪರಮಪಾವನವಪ್ಪ ಪಾದೋದಕವ ನಂಬದವರು,
ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ ದೂರ.
Art
Manuscript
Music
Courtesy:
Transliteration
Liṅga muṭṭi ācamana māḍuvaru
liṅgāṅgigaḷalladavaru.
Māḍidaḍeyū māḍali.
Liṅga pādōdakava dharisi,
maraḷi apavitra śaṅkeyinda ācamana māḍidaḍe
aghōra narakadallikkuvadayyā,
ā pādōdakave viṣavāgi.
Adentendaḍe:
Śambhōḥ pādōdakaṁ pītvā paścādaśuciśaṅkayā |
ya ācamati mōhēna taṁ vidyādbrahma ghātakaṁ ||
intemba vacanava kēḷi nambuvadayyā.
Paramapāvanavappa pādōdakava nambadavaru,
basavapriya kūḍalacennasaṅgayyaṅge dūra