Index   ವಚನ - 76    Search  
 
ವದನದ್ವಾರಕ್ಕೆ ಗುದದ್ವಾರ ಸರಿಯೆಂದು, ಗುದದ್ವಾರದಲ್ಲಿ ಬಂದುದ ವದನದ್ವಾರದಲ್ಲಿ ಕೊಂಬವಂಗೆ ಹೋ ಹೋ! ಹರಂಗೆ ಹರಿಯ ಸರಿಯೆನಬಹುದು. ಯಾದಾಸ್ಯಾಪಾನಯೋಃ ಸಾಮ್ಯಂ ಇಂದ್ರತ್ವೇಪಿ ನ ವಿದ್ಯತೇ | ತಥಾ ವಿಷ್ಣ್ವಾದಿ ಬುಧೈಸ್ತು ರುದ್ರಸಾಮ್ಯಂ ನ ವಿದ್ಯತೇ || ಇಂತೆಂದುದಾಗಿ, ಇದು ಕಾರಣ, ಹರಿವಿರಿಂಚಾದಿ ದೇವತೆಗಳನು ಶಿವಂಗೆ ಸರಿಯೆಂದು ಗಳಹುವ ನರಕಿಗಳ ಬಾಯಲಿ ಹುಳು ಸುರಿಯದಿಹವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ?