Index   ವಚನ - 75    Search  
 
ಲಿಂಗ ಮುಟ್ಟಿ ಆಚಮನ ಮಾಡುವರು ಲಿಂಗಾಂಗಿಗಳಲ್ಲದವರು. ಮಾಡಿದಡೆಯೂ ಮಾಡಲಿ. ಲಿಂಗ ಪಾದೋದಕವ ಧರಿಸಿ, ಮರಳಿ ಅಪವಿತ್ರ ಶಂಕೆಯಿಂದ ಆಚಮನ ಮಾಡಿದಡೆ ಅಘೋರ ನರಕದಲ್ಲಿಕ್ಕುವದಯ್ಯಾ, ಆ ಪಾದೋದಕವೆ ವಿಷವಾಗಿ. ಅದೆಂತೆಂದಡೆ: ಶಂಭೋಃ ಪಾದೋದಕಂ ಪೀತ್ವಾ ಪಶ್ಚಾದಶುಚಿಶಂಕಯಾ | ಯ ಆಚಮತಿ ಮೋಹೇನ ತಂ ವಿದ್ಯಾದ್ಬ್ರಹ್ಮ ಘಾತಕಂ || ಇಂತೆಂಬ ವಚನವ ಕೇಳಿ ನಂಬುವದಯ್ಯಾ. ಪರಮಪಾವನವಪ್ಪ ಪಾದೋದಕವ ನಂಬದವರು, ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ ದೂರ.