Index   ವಚನ - 77    Search  
 
ವಾಯು ಇಂದ್ರಿಯದಿಂದ ಅಂಜಾನಾದೇವಿಗೆ ಹುಟ್ಟಿದ ಹನುಮನ ರೋಮಕೋಟಿಲಿಂಗವೇಂಬ ಅಜ್ಞಾನಿ ದ್ವಿಜರು ನೀವು ಕೇಳಿರೋ ಭೀಮಂಗೆ ಮಹೇಂದ್ರಜಾಲ ಮಂತ್ರಪುಷ್ಪಂಗಳಂ ಕೊಟ್ಟು ಒಂದು ಲಿಂಗಾಕಾರವಾಗಿ ತೋರಲು ಅದ ಕಂಡು ಅರ್ಚಿಸುವೆನೆಂದು ಪುರುಷಮೃಗ ನಿಲ್ಲಲು ಮುಂಚಿ ಹೋಹುದೆಂದು ಮಂತ್ರಶಕ್ತಿಯ ಕುಟಿಲವಲ್ಲದೆ ಸಹಜಲಿಂಗವಲ್ಲ ತ್ರಿಶಂಕು ಹರಿಶ್ಚಂದ್ರ ರಾಮಪ್ರತಿಷ್ಠೆ ಮಾಡಲಾಗಿ ಅವರವರ ಹೆಸರಲಿಂಗ ಅನಂತಉಂಟು. ಹಿಮಸೇತು ಮಧ್ಯದಲ್ಲಿ ಪುರುಷಾಮೃಗ ಲಿಂಗವೆಂದು ಮೂರುಕೋಟಿ ಲಿಂಗಶಿವಾಲಯವುಳ್ಳರೆ ತೋರಿರೊ? ರಾಮ ರಾವಣನ ಕೊಂದ ಬ್ರಹ್ಮಹತ್ಯದೋಷ ಕಳೆವುದಕ್ಕೆ ಶ್ರೀಪರ್ವತ ಲಿಂಗದರ್ಶನವ ಮಾಡೂದಕ್ಕೆ ಹೋಹಲ್ಲಿ ಪರ್ವತ ನಾಲ್ವತ್ತೆಂಟು ಗಾವುದ ಲಿಂಗಮಯವೆಂದಡೆ ಹನುಮನ ಬಾಲದ ಮೇಲೆ ಹೋಗಿ ಲಿಂಗದರ್ಶನವ ಮಾಡಿದನಾ ರಾಮ ಸೇತುಬಂಧ ರಾಮೇಶ್ವರ ಪ್ರತಿಷ್ಠೆಗೆ ಹನುಮ ಲಿಂಗನ ತರಹೋದ ಮೇಲೆ ಸುಮುರ್ಹೂತ ಬಂದರೆ ಮಳಲ ಪಾಣಿವಟ್ಟಲ ಮಾಡಿದವರೊಳು ಗಂಧ ಕೊರಡಲಿಂಗವೆಂದು ಅದರೋಳು ನಿಲಿಸಿ ಪೂಜಿಸಿ ತ್ರಿಕೋಟಿಲಿಂಗಕ್ಕೆ ಅದೆ ಮೊದಲೆಂದು ಪಾಪ ಹೋಗಲೆಂದು ಅರ್ಚಿಸಿದ ಮೇಲೆ ಹನುಮಲಿಂಗದ ಹೊಳೆಯಿಂದ ಲಿಂಗನ ಮತ್ತೆ ತಂದು ಮೊದಲ ಲಿಂಗನ ಕೀಳಲು ಪಾತಾಳಕ್ಕಿಳಿದು ಬಾರದೆ ಬಾಲವ ಸುತ್ತಿ ಬಿಗಿದ ಕುರುಹು ಬಾಲ ಮುಖ ಕೆಂಪಾಗಿ ಕಪಿಗಳಲ್ಲದೆ ರಕ್ತಮಸಗಿ ತಾ ತಂದ ಲಿಂಗವ ಬೇರೆ ಪ್ರತಿಷ್ಠೆಯ ಮಾಡಿ ಹನುಮಂತೆಶ್ವರಲಿಂಗವೆಂದೈತೆ ಆ ಲಿಂಗವ ಬೇರೆ ಪೂಜಿಸಿದನಾ ರಾಮ ತನ್ನ ಮೈಯೊಳಗೆ ಲಿಂಗವಿದ್ದರೆ ತಾ ಬೇರೆ ತರಹೋಗಲೇಕೆ? ಹಸುವಿಲ್ಲದ ಮದ್ದು ತನ್ನಲ್ಲಿದ್ದರೆ ಅಸನಕ್ಕೆ ಲೋಚುಬಡಲೇಕೆ? ರಾಮಲಿಂಗಗಳನರ್ಚಿಸುವಲ್ಲಿ ರಾಮನಾಳಾಗಿರ್ದು ರಾಮ ಸತ್ತರೆ ಮುಂದೆ ಗತಿಯ ಕಾಣದೆ ಶಿವಲಿಂಗವನರ್ಚಿಸಿ ಬ್ರಹ್ಮಪಸದವ ಬೇಡೆ ತಪವಿಹುದನರಿದು ಹರಿಬ್ರಹ್ಮರು ಹಕ್ಕಿಹಂದಿಯಾಗಿ ಲಿಂಗದ ನಿಲುಕಡೆಯನರಿಯದೆ ಹೋದಸರೆಂಬುದಂ ಅರಿದು ಡಿಳ್ಳಿರಾಯ ಹಳ್ಳಿಯ ಬೇಡಿ ತಪವಿದ್ದಾನೆಂಬ ಚಾಂಡಾಲವ ನೋಡಾ? ಮಹಾಲಿಂಗಕ್ಕೆ ಆಶ್ರಯವಾದ ಪದದಲ್ಲಿಹಾತ ಬ್ರಹ್ಮಪದಕ್ಕೆ ತಪವಿದ್ದಹನೆಂಬ ಅಜ್ಙಾನವನೇನೆಂಭೆನಯ್ಯ ಆ ನೂರರಿಂದಂ ಮಾಡಿದ ಭೂಮಿಯಲ್ಲಿ ಬಿದ್ದು ಹಲ್ಲುಗಳ ಹೋಗಾಡಿಕೊಂಡು ಭಂಗ ಹೋಗಿ ಮೃತ್ಯುವಿನ ಬಾಧೆಗೊಳಗಾದ ಹನುಮನ ರೋಮದಲ್ಲಿ ಕೋಟಿ ಮೃತ್ಯುಜಂಯ ಲಿಂಗವಿದ್ದಹವೆಂಬ ಅಭಾಸರನೇನೆಂಬೆ ಬಸವಪ್ರಿಯ ಕೂಡಲಚೆನ್ನಸಂಗಮದೇವಾ