Index   ವಚನ - 80    Search  
 
ವೇದ ನಾಲ್ಕನು ಓದಿದಡೇನು? ಶಾಸ್ತ್ರವ ನೆರೆ ಕೇಳಿದಡೇನು? ಶಿವಜ್ಞಾನಹೀನರು ಬಲ್ಲರೆ ಭಕ್ತಿಯ ಪಥವನು? ಅಲೋಡ್ಯಂ ಚ ಚತುರ್ವೇದೀ ಸರ್ವಶಾಸ್ತ್ರವಿಶಾರದಃ | ಶಿವತತ್ವಂ ನ ಜಾನಾತಿ ದರ್ವೀ ಪಾಕರಸಂ ಯಥಾ || ಕ್ಷೀರದೊಳಗಣ ಸಟ್ಟುಗ ಸವಿಸ್ವಾದುಗಳ ಬಲ್ಲುದೆ? ಓದಿದ ನಿರ್ಣಯವ ನಮ್ಮ ಮಾದಾರ ಚೆನ್ನಯ್ಯ, ಮಡಿವಾಳಯ್ಯ, ಡೋಹರ ಕಕ್ಕಯ್ಯನವರು ಬಲ್ಲರು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.