Index   ವಚನ - 99    Search  
 
ಹರನ ಕೈಯ ಕಪಾಲವಿ[ಡಿ]ದ ತೆರನನರಿಯದಲ್ಲಾ ಲೋಕ. ನರಜನ್ಮಕ್ಕಾಹುತಿಯ ಬಗೆದು, ಅರುವತ್ತುನಾಲ್ಕು ಭಾಗವ ಮಾಡಿ, ಚೌಷಷ್ಟಿವಿದ್ಯವು ನಿಮಗೆ ಕಾಯಕಪ್ಪರವೆಂದು ಕೈವರ್ತಿಸಿದನೀ ಜಗಕ್ಕೆ ಶಿವನು. ಇದು ಕಾರಣ, ಶಿವಭಕ್ತರು ಕರ್ಮಮೂಲ ಕಾಯಕವಿಡಿದು ಬಂದುವೆ ಲಿಂಗಕ್ಕರ್ಪಿತ. ಕಾಯಕ ಹೀನವೆಂದು ಬಿಟ್ಟು ಹಿಡಿದಡೆ ಭಕ್ತನಲ್ಲ. ಪಥಕ್ಕೆ ಸಲ್ಲ, ಪುರಾತನರೊಲ್ಲರು, ಲಿಂಗ ಮೆಚ್ಚಲ್ಲ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.