ಹರಿದು ಹತ್ತಿ ಮುಟ್ಟಲಿಲ್ಲ,
ಮುಟ್ಟಿ ಮರಳಿ ಇಳಿಯಲಿಲ್ಲ,
ಬೆರಸಿಹೆನೆಂದು ನೆನೆಯಲಿಲ್ಲ.
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ
ಶಬ್ದಕ್ಕೆ ಇಂಬಿಲ್ಲದಿರ್ದೆನು.
Art
Manuscript
Music
Courtesy:
Transliteration
Haridu hatti muṭṭalilla,
muṭṭi maraḷi iḷiyalilla,
berasihenendu neneyalilla.
Basavapriya kūḍalacennasaṅgayyanalli
śabdakke imbilladirdenu