Index   ವಚನ - 3    Search  
 
ಅದು ಹುಸಿ, ಕಚ್ಚಿದಡೆ ವಿಷವೇರಿತ್ತಲ್ಲದೆ, ವಿಷಕ್ಕೆ ಹಾಹೆ ಇಲ್ಲ. ಇರಿದವನಿದ್ದಂತೆ ಅಂಬಿಗೆ ಮುನಿವರೆ? ಹಾವಿದ್ದಂತೆ ವಿಷವ ಕೊಲಬಹುದೆ? ಎಲ್ಲರಲ್ಲಿ ಲೇಪ ನೀನಾಗಿದ್ದು, ಕರಣಂಗಳ ಹೋರಾಟವೇಕೆ ಎನಗೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ?