Index   ವಚನ - 11    Search  
 
ಉಪ್ಪಿನ ಸಮುದ್ರದೊಳಗೊಂದು ಚಿಕ್ಕಬಾವಿ ಹುಟ್ಟಿತ್ತು. ಬಾವಿಯ ತಳದಲ್ಲಿ ನೀರಿಲ್ಲ. ಬಾವಿ ನೀರಿನೊಳಗೆ ಹುಟ್ಟಿತ್ತು, ಸ್ವಾದೋದಕವಾಯಿತ್ತು. ಉದಕವ ನೋಡಿದವ ಕೆಟ್ಟ, ಕುಡಿದವ ಸತ್ತ. ಆ ನೀರ ಹಿಡಿದವ ಬದುಕಿದ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.