ಒನಕೆಯ ಕಣ್ಣಿನಲ್ಲಿ ಒಂದು ಬೆನಕ ತಲೆದೋರಿತ್ತು.
ತಲೆಯಲ್ಲಿ ಹೊಟ್ಟೆ, ಬಾಯಲ್ಲಿ ಕಣ್ಣು,
ಬಾಲೆಯರ ನಳಿತೋಳಲ್ಲಿ ಕಾಲು.
ಹೆಣ್ಣುಟ್ಟ ಬಣ್ಣ ಸೆರಗಿನಲ್ಲಿ ಅದೆ.
ಬೆನಕನ ಹೊತ್ತವನ ಅಪ್ಪ ಸತ್ತು, ಒನಕೆಯ ಕಣ್ಣೊಡೆದು,
ನಳಿತೋಳು ಮುರಿದು, ಬಣ್ಣ ಹರಿದು,
ಅವರ ಅಣ್ಣನ ಮಗಳ ಗಂಡ ಬಿಣ್ಣಿದ,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇ
Art
Manuscript
Music
Courtesy:
Transliteration
Onakeya kaṇṇinalli ondu benaka taledōrittu.
Taleyalli hoṭṭe, bāyalli kaṇṇu,
bāleyara naḷitōḷalli kālu.
Heṇṇuṭṭa baṇṇa seraginalli ade.
Benakana hottavana appa sattu, onakeya kaṇṇoḍedu,
naḷitōḷu muridu, baṇṇa haridu,
avara aṇṇana magaḷa gaṇḍa biṇṇida,
sagarada bom'manoḍeya
tanumana saṅgamēśvarā.