Index   ವಚನ - 16    Search  
 
ಕಂಗಳ ಸೂತಕ ಹೋಯಿತ್ತು, ನಿಮ್ಮಂಗದ ದರ್ಶನದಿಂದ. ಮನದ ಸೂತಕ ಹೋಯಿತ್ತು, ನಿಮ್ಮ ನೆನಹು ವೇಧಿಸಿ. ಸಕಲಸೋಂಕಿನ ಭ್ರಾಂತು ಬಿಟ್ಟಿತ್ತು, ನಿಮ್ಮ ಹಿಂಗದ ಅರಿಕೆಯಲ್ಲಿ. ಇಂತೀ ನಾನಾವಿಧದ ಭೇದೋಪಭೇದಂಗಳೆಲ್ಲವು, ನಿಮ್ಮ ಕಾರುಣ್ಯದಲ್ಲಿಯೆ ಲಯ, ಸಗರದಬೊಮ್ಮನೊಡೆಯ ತನುಮನ ಸಂಗಮೇಶ್ವರಾ.