Index   ವಚನ - 50    Search  
 
ಧ್ಯಾನ ಧಾರಣ ಸಮಾಧಿಯೆಂಬೀ ಮೂರು, ಕರ್ಮಕಾಂಡ. ಚಿಚ್ಛಕ್ತಿ ಚಿದ್ಘನ ಸುಶಕ್ತಿ ಚಿದಾದಿತ್ಯಸಂಪದ ತ್ರಿವಿಧಭೇದ, ಜ್ಞಾನಕಾಂಡ. ಇಂತೀ ಭಾವ, ನಿಜವ ನೆಮ್ಮಿ ಕುರುಹುದೋರದೆ, ಭಾವ ನಿರ್ಭಾವವಾಗಿ ನಿಂದುದು ಪ್ರಾಣಲಿಂಗಸಂಬಂಧ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.