ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ?
ಅವಳು ತನ್ನ ಪತಿಗೆ ಓಪಳೆ?
ಈ ಉಭಯದ ಮಾರ್ಗ ಅರಿವ ಅರಿವಿಂಗೆ,
ಹೇಸಿ ತಿಂಬ ಕರಣಕ್ಕೆ ಒಡಗೂಡಿದ ಸ್ನೇಹವುಂಟೆ?
ಇದನರಿ, ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Pāradvārava māḍabandava abeya gaṇḍage kūpane?
Avaḷu tanna patige ōpaḷe?
Ī ubhayada mārga ariva ariviṅge,
hēsi timba karaṇakke oḍagūḍida snēhavuṇṭe?
Idanari, sagarada bom'manoḍeya
tanumana saṅgamēśvaraliṅgavanarivudakke.