ರಜವೆಂಬ ಹೂವಿನ ಗಿಡುವಿನಲ್ಲಿ,
ನಿರ್ಜರವೆಂಬ ಕುಸುಮ ಹುಟ್ಟಿತ್ತು.
ನಿರವಯವೆಂಬ ಗಂಧ ಸಂಭ್ರಮಿಸಿತ್ತು.
ಕೈಯುಗುರಿನಲ್ಲಿ ಮುಟ್ಟದೆ, ಮನದ ನಖದ ಕೊನೆಯಲ್ಲಿ ಎತ್ತಿ,
ನಿರೂಪವ ಮಂಡೆಯ ಮೇಲಿರಿಸಲು,
ಎನ್ನ ಸಗರದ ಬೊಮ್ಮನೊಡೆಯ ತನುಮನ ಸಂಗವಾದಲ್ಲಿ,
ಅಭೇದ್ಯವಾದ ಪ್ರಾಣಲಿಂಗಕ್ಕೆನ್ನ
ಪ್ರಾಣಪೂಜೆಯಾಯಿತ್ತಯ್ಯಾ.
Art
Manuscript
Music
Courtesy:
Transliteration
Rajavemba hūvina giḍuvinalli,
nirjaravemba kusuma huṭṭittu.
Niravayavemba gandha sambhramisittu.
Kaiyugurinalli muṭṭade, manada nakhada koneyalli etti,
nirūpava maṇḍeya mēlirisalu,
enna sagarada bom'manoḍeya tanumana saṅgavādalli,
abhēdyavāda prāṇaliṅgakkenna
prāṇapūjeyāyittayyā.