ರೂಪಿನ ದರ್ಪಣವ ಹಿಡಿದು,
ತನ್ನಯ ರೂಪ ನೋಡಿದಲ್ಲಿ,
ನಿಹಿತದ ಇರವಾಯಿತ್ತು.
ಆ ರೂಪ ಕಂಡ ನಿರೂಪಿನ ದೃಷ್ಟಿ,
ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ.
ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ.
ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ.
ಪಡಿಭಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ
ಉಭಯ ಅಂಗವು ನೀನೆ,
ಸಗರದ ಬೊಮ್ಮನ