Index   ವಚನ - 75    Search  
 
ರೂಪುಸಹಿತ ಭಕ್ತ, ರೂಪುವಿರಹಿತ ಶರಣ. ಶರಣಭಾವವಿರಹಿತ ಸಮ್ಯಜ್ಞಾನಿ. ಇಂತೀ ತ್ರಿವಿಧ ಗುಣವ ಕಳೆದಲ್ಲಿ, ಉಳಿದ ಶೇಷ ಸಂಭವಸಂಯುಕ್ತ. ಅದರ ಬೆಂಬಳಿಯನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.