Index   ವಚನ - 77    Search  
 
ಶಕ್ತಿಯಂಗದ ಯೋನಿಯಲ್ಲಿ ಶುಕ್ಲ ಸೋರಿ, ಬೆಚ್ಚು ಪುತ್ತಳಿಯಾದ ಠಾವಾವುದು? ಕೂಡಿದನಪ್ಪ, ಕೂಡಿಸಿಕೊಂಡಳವ್ವೆ. ಉಭಯದ ಯೋಗದಿಂದಾದ ಮತ್ತೆ ಬ್ರಹ್ಮನ ಅಗಡವೇಕೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ?