ಹಾರುವ ಹಕ್ಕಿಯ ತಲೆಯ,
ಕುಳಿತಿದ್ದ ಗೂಗೆ ನುಂಗಿತ್ತು,
ಕುಳಿತಿದ್ದ ಗೂಗೆಯ ಕಣ್ಣ,
ಕಾಗೆಯ ಮರಿ ಕುಡುಕಿತ್ತು.
ಕಾಗೆಯ ಮರಿಯ, ಕೋಗಿಲ ಕಂಡು,
ಅದ ಬೇಡಾ ಎಂದಡೆ,
ಗಿಳಿ ಹಾಗಹುದೆಂದು ಹಾರಿ ಹೋಯಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು
ಘಟಪಂಜರವನೊಲ್ಲದೆ.
Art
Manuscript
Music
Courtesy:
Transliteration
Hāruva hakkiya taleya,
kuḷitidda gūge nuṅgittu,
kuḷitidda gūgeya kaṇṇa,
kāgeya mari kuḍukittu.
Kāgeya mariya, kōgila kaṇḍu,
ada bēḍā endaḍe,
giḷi hāgahudendu hāri hōyittu,
sagarada bom'manoḍeya tanumana saṅgamēśvaranu
ghaṭapan̄jaravanollade.