ಒಂದೆ ಕಂಬದ ನಡುವೆ ಹಲವು ಬಿದಿರುಗೂಡಿ,
ಅಗಲಕ್ಕೆ ಹೊಲಬಾಯಿತ್ತು ನೋಡಾ.
ಬಿಸಿಲ ಕಾಯದು, ಗಾಳಿಯ ತಡೆಯದು,
ಮಳೆಗೆ ನೆನೆವುತ್ತಿದೆ ನೋಡಾ.
ಈ ಸತ್ತಿಗೆಯ ಹರಕು ನಿಜಸತ್ಯವಾಗಿ,
ಐಘಂಟೇಶ್ವರಲಿಂಗವನರಿದಲ್ಲದೆ
ಸತ್ತಿಗೆಯ ಕಾವಿನ ಹಂಗು ಹರಿಯದು ನೋಡಾ.
Art
Manuscript
Music
Courtesy:
Transliteration
Onde kambada naḍuve halavu bidirugūḍi,
agalakke holabāyittu nōḍā.
Bisila kāyadu, gāḷiya taḍeyadu,
maḷege nenevuttide nōḍā.
Ī sattigeya haraku nijasatyavāgi,
aighaṇṭēśvaraliṅgavanaridallade
sattigeya kāvina haṅgu hariyadu nōḍā.