Index   ವಚನ - 6    Search  
 
ಆದಿಯಲ್ಲಿ ದೇವಾ, ನಿಮ್ಮನಾರು ಬಲ್ಲರು ? ವೇದಂಗಳು ಮುನ್ನಲತ್ತತ್ತಲರಿಯವು. ವೇದಿಗಳು ಪರಬ್ರಹ್ಮವೆಂದೆಂಬರು. ನಾದ ಬಿಂದು ಕಳಾತೀತನೆಂದೆಂಬರು. ಸಾಧು ಸಜ್ಜನ ಸದ್ಭಕ್ತರಿಚ್ಫೆಗೆ ಬಂದೆಯಾಗಿ, ಈಗೀಗ ದೇವನಾದೆ ಶಂಭುಜಕ್ಕೇಶ್ವರಾ.