Index   ವಚನ - 5    Search  
 
ಅಯ್ಯಾ, ಮಾಹಾಲಿಂಗೈಕ್ಯಾನುಭಾವಿಯೆಂದು ಪೂರ್ವಾರ್ಜಿತವನುಂಡಡೆ ಭಂಗ, ಹರಶರಣೆಂದು ಭವಮಾಲೆಗೆ ಒಳಗಾದಡೆ ಭಂಗ. ಹರವಶವೆನಿಸಿ ವಿಧಿವಶವೆನಿಸಿದಡೆ ಅದು ನಿಮಗೆ ಭಂಗ ಕಾಣಾ ಶಂಭುಜಕ್ಕೇಶ್ವರ.