Index   ವಚನ - 14    Search  
 
ತಲೆಯ ಮೇಲೆ ತಲೆಯುಂಟೆ ? ಹಣೆಯಲ್ಲಿ ಕಣ್ಣುಂಟೆ ? ಗಳದಲ್ಲಿ ವಿಷವುಂಟೆ ? ದೇವರೆಂಬವರಿಗೆಂಟೊಡಲುಂಟೆ ? ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ? ಎಲವೊ, ನಿನ್ನ ಹಣೆಯಲ್ಲಿ ನೇಸರು ಮೂಡದೆ ? ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಂಗಳುಂಟೆ ?